೫೯ನೇ ಸ್ವಾತಂತ್ರ್ಯ ದಿನಾಚರಣೆ ಸಂಧರ್ಭದಲ್ಲಿ
ಮೂರು ಅಥವಾ ನಾಲ್ಕನೇ ತರಗತಿಯಲ್ಲಿ
ಒದಿದ ಪದ್ಯವೊಂದು ನೆನಪಿಗೆ ಬಂದಿತು.
ಆದರೆ ಇದನ್ನು ಬರೆದವರು ನೆನಪಿನಲ್ಲಿ ಇಲ್ಲ :-(
ನಮ್ಮ ಬಾವುಟ
ಏರುತಿಹುದು ಹಾರುತಿಹುದು
ನೋಡು ನಮ್ಮ ಬಾವುಟ
ತೋರುತಿಹುದು ಹೊಡೆದು ಹೊಡೆದು
ಬಾನಿನಗಲ ಪಟಪಟ
ಕೇಸರಿ ಬಿಳಿ ಹಸಿರು ಮೂರು
ಬಣ್ಣ ನಡುವೆ ಚಕ್ರವು
ಸತ್ಯ ಶಾಂತಿ ತ್ಯಾಗ ಮೂರ್ತಿ
ಗಾಂಧಿ ಹಿಡಿದ ಚರಕವು
ಇಂತ ಧ್ವಜವು ನಮ್ಮ ಧ್ವಜವು
ನೋಡು ಹಾರುತಿಹುದು
ಧ್ವಜದ ಶಕ್ತಿ ನಮ್ಮ ಭಕ್ತಿ
ನಾಡಗುಡಿಯ ಮೆರೆವುದು
ಕೆಂಪು ಕಿರಣ ತುಂಬಿ ಗಗನ
ಹೊನ್ನ ಬಣ್ನವಾಗಿದೆ
ನಮ್ಮ ನಾಡ ಗುಡಿಯ ನೋಡ
ನೋಡಿರಣ್ಣ ಹೇಗಿದೆ
Wow!!!!
ReplyDeleteಕನ್ನಡದ ಪದ್ಯ!!!
ಯಾಕೆ ಸ್ವಾಮಿ? ಕನ್ನಡ ಪದ್ಯ ನೋಡೇ/ಕೇಳೇ ಇಲ್ಲವಾ? :)
ReplyDelete^o)
ReplyDeleteಕನ್ನಡ ಪದ್ಯ ನೋಡದೇ, ಕೇಳದೇ ಏನೂ ಇಲ್ಲ, ಆದರೆ, ಈ Blogನಲ್ಲಿ ಇದೇ ಮೊದಲನೆಯದು. BTW, ಎಲ್ಲೂ ನೋಡದೇ, ಕೇಳದೇ ಇದ್ದರೆ ಮಾತ್ರ ಉದ್ಗರಿಸಬಹುದೇನು???
:)
cenna vIra kaNavi yavara kavana irabohudu.
ReplyDelete